ನಾನು ಎಂಟನೆ ಕ್ಲಾಸಿನಿಂದಾನೂ ಒಂದ್ತರ ಗಾಂಧೀ. ಕುಳ್ಳ ಬೇರೆ. ಮೂರ್ ವರ್ಷನೂ ಮೊದಲ್ನೇ ಬೆಂಚು. ಅದೂ ಎಂಟರ್ ಆಗ್ತಿದ್ದಂಗೆ ಬಲಗಡೆನೆ.
ಅಭ್ಯಾಸ ಆಗಿಹೋಗಿ ಹತ್ತನೇ ಕ್ಲಾಸಿಗೆ ಮೊದಲ್ನೇ ದಿನ ಕಾಲಿಟ್ಟಾಗ, ಬಂದಿದ್ದೇ ಲೇಟು. ತುಂಬಾ ಭಯ ಪಟ್ಕೊಂಡು ಆತುರ ಆತುರವಾಗಿ ಕ್ಲಾಸಿಗೆ ನುಗ್ಗಿ ಮೊದಲ್ನೇ ಬೆಂಚನಲ್ಲಿ ಕೂತೇಬಿಟ್ಟೆ. ಏನೋ ಸರಿ ಇಲ್ಲಾ ಅಂತ ಅನ್ನುಸ್ತಿತ್ತು. ಆದರೂ ಭಯ, ಎಲ್ಲಿ ಟೀಚರ್ರು ನನ್ನನ್ನೇನಾದ್ರೂ ಕೆಳ್ಬಿಡ್ತಾರೋ ಅಂತ. ಪುಸ್ತಕ ಎಲ್ಲ ಟೇಬಲ್ ಮೇಲೆ ಇಟ್ಟೆ. ಅಲ್ಲಿ ಇಲ್ಲಿ ಯಾರೋ ನಗೋ ಹಾಗಾಯ್ತು. ನಿಧಾನವಾಗಿ ಪಕ್ಕ ತಿರುಗಿ ನೋಡ್ದೆ. ಸ್ವಲ್ಪ ಹೊತ್ತು ಏನೂ ಅರ್ಥ ಆಗ್ಲಿಲ್ಲ. ಅದ್ಯಾಕೆ ನನ್ ಪಕ್ಕ ಇದ್ದಿದ್ ಹುಡುಗರೆಲ್ಲ ಚೇಂಜ್ ಆಗೊಗಿದ್ದಾರೆ ಅಂತ. ಆ ನರ್ವಸ್ನೆಸ್ಸ್ ಇನ್ನು ಇತ್ತು. ನನಗೆ ಅಂಟಿಕೊಂಡಹಾಗೆ ಒಬ್ಳು ಹುಡುಗಿ. ಅವಳ್ ಪಕ್ಕಾನೂ ಹುಡುಗಿ, ಹಿಂದೆ ಬೆಂಚ್ ನಲ್ಲೆಲ್ಲಾ ಬರೀ ಹುಡ್ಗೀರೆ!! ಎದೆ ಒಡೆದೋಯ್ತು!! ದಬ ದಬಾಂತ ಬುಕ್ಕು ಬ್ಯಾಗೆಲ್ಲ ಹಾಗಾಗೆ ಎತ್ಕೊಂಡು ಹೊರಗೆ ಓಡಿಹೋಗ್ಬಿಟ್ಟೆ. ನಮ್ಮದು ಪಕ್ಕದಲ್ಲೇ ಇತ್ತು ರೂಮು.
No comments:
Post a Comment