ಕರ್ನಾಟಕದ ಮಾನ್ಯ ಮುಖ್ಯ ಮಂತ್ರಿಯವರಿಗೆ ಬಹಿರಂಗ ಪತ್ರ
Please click here for English Version
ಕರ್ನಾಟಕದ ಮಾನ್ಯ ಮುಖ್ಯ ಮಂತ್ರಿಯವರಿಗೆ ಬಹಿರಂಗ ಪತ್ರ
ನಮಸ್ಕಾರಗಳು.
ನಿಮ್ಮ ಪಕ್ಷವು ಅಧಿಕಾರಕ್ಕೆ ಬರುವುದಕ್ಕೆ ಮುಂಚೆ, ಚುನಾವಣೆ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಸಾಕಷ್ಟು ಕಾರ್ಯ ಯೋಜನೆಗಳನ್ನ ಘೋಷಿಸಿದ್ದಿರಿ. ಕರ್ನಾಟಕ ಜನತೆ ನಿಮ್ಮನ್ನು ಬಹುಮತದಿಂದ ಆಯ್ಕೆ ಮಾಡಿ, ಮರಳಿ ಮರಳಿ ಅಧಿಕಾರಕ್ಕೆ ತರುತ್ತಿದ್ದಾರೆ. ಆದರೂ, ಸಾಮಾನ್ಯ ಪ್ರಜೆಗಳಿಗೆ ಕಣ್ಣಿಗೆ ಕುಕ್ಕುವಂತೆ ಭ್ರಷ್ಟಾಚಾರ ಕಾಣಿಸುತ್ತಲೇ ಇದೆ. ನಿಮ್ಮ ಎಲ್ಲಾ ಇಲಾಖೆಗಳಲ್ಲೂ ಇನ್ನೂ ಇದು ಕಾಣಿಸುತ್ತಲೇ ಇದೆ ಅನ್ನೋದು ಸರ್ವೇ ಸಾಮಾನ್ಯರಿಗೂ ಗೊತ್ತಿರುವ ವಿಷಯ. ಅದರಲ್ಲೂ ಪೋಲೀಸ್ ಇಲಾಖೆಯಲ್ಲಿ ನಡೆಯುವ ಅಧಿಕಾರ ದುರ್ಬಳಕೆ, ಆಯವ್ಯಯ ದುಃಸ್ಥಿತಿ, ದೈನಂದಿನ ವಿಷಯವಾಗಿದೆ.
ಕರ್ನಾಟಕವನ್ನು ಶ್ರೀ ನರೇಂದ್ರ ಮೋದಿಯವರ ಗುಜರಾತ್ ರಾಜ್ಯದ ಆಳಿಕೆ ಮಾದರಿಯಲ್ಲಿ ಯಶಸ್ಸು ಪಡೆಯುವ ಕನಸಿನಲ್ಲಿ ಕರ್ನಾಟಕದ ಜನತೆ ನಿಮಗೆ ಆಡಳಿತ ಅವಕಾಶ ಮಾಡಿಕೊಟ್ಟಿದ್ದಾರೆ. ಒಬ್ಬ ಸಾಮಾನ್ಯ ಪ್ರಜೆಗೆ ಒಂದು ಉತ್ಕೃಷ್ಟ ರಾಜ್ಯಭಾರದ, ಮೋದಿಯವರಿಗಿಂತಲೂ ನಮ್ಮ ರಾಜ್ಯದ ಸಾಧನೆಗಳನ್ನ ನಮ್ಮ ದೇಶಕ್ಕೇ ಉದಾಹರಣೆಯಾಗಿ, ತೋರಿಸುವ ಚಿತ್ರ, ಕಣ್ಣೆದುರು ಸದಾಕಾಲ ನಿಂತಿರುವುದರಲ್ಲಿ ಸಂದೇಹವೇ ಇಲ್ಲ. ಕೆಲವು ಗಮನಾರ್ಹ ಸಾಧನೆಗಳನ್ನು ನಿಮ್ಮ ಸರ್ಕಾರ ಖಂಡಿತ ಮಾಡಿದ್ದರೂ, ಬ್ರಷ್ಟಾಚಾರದ ವಿಷಯದಲ್ಲಿ ನಿಮ್ಮ ಪರಿಷ್ರಮ ಎಂದಿಗೂ ಎದ್ದು ಕಾಣುತ್ತಿಲ್ಲವೆಂದು ಧೈರ್ಯವಾಗಿ ವ್ಯಕ್ತಪಡಿಸಬಹುದು.
ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ, ಈ ಇಲಾಖೆಗಳಲ್ಲಿ ಯಾವುದೇ ಮಾರ್ಪಾಟುಗಳು ಕಾಣುತ್ತಿಲ್ಲ. ಲಂಚ ಮತ್ತು ಸುಲಿಗೆ ನಿರಾಯಾಸವಾಗಿ ನಿಮ್ಮ ಅಧಿಕಾರಿಗಳೇ ನಡೆಸುತ್ತಿದ್ದಾರೆ. ನಿಮ್ಮ ಪ್ರಣಾಳಿಕೆಯಲ್ಲಿದ್ದ ತುರ್ತನ್ನು ನೀವು ಮರೆತಿದ್ದೀರಿ!
ನಾವೆಲ್ಲ ಕಂಡಂತೆ, ಪ್ರತಿದಿನ ಸಂಜೆ, ಪೋಲೀಸ್ ಇಲಾಖೆಯ ಗಸ್ತು ವಾಹನಗಳಲ್ಲೇ, ಪೇದೆಗಳು, ಪೋಲೀಸ್ ಅಧಿಕಾರಿಗಳು, ಬೀದಿ ಬೀದಿಯಲ್ಲಿ ಸುತ್ತಾಡಿ, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಸಣ್ಣ ಸಣ್ಣ ವ್ಯಾಪಾರಿಗಳಿಂದ ಕನಿಷ್ಠ ೧೦ ರುಪಾಯಿ ಇಂದ ೫೦-೧೦೦ ರುಪಾಯಿಗಳವರೆಗೆ ಒಬ್ಬೊಬ್ಬರಿಂದಲೂ ಸುಲಿಗೆ ಬಹಿರಂಗವಾಗಿ, ಮುಚ್ಚು ಮರೆ ಇಲ್ಲದೆ ಮಾಡುತಿದ್ದಾರೆ. ಹಾಗೆಯೇ ದೊಡ್ಡ ದೊಡ್ಡ ಸಂಸ್ಥೆಗಳಿಂದ ಕೂಡ ಮಾಸಿಕ "ಮಾಮೂಲಿ" ವಸೂಲು ಮಾಡುತಿದ್ದಾರೆ. ಒಬ್ಬ ದಫ಼ೇದಾರ ಕೂಡ ಆ ವ್ಯಾಪಾರಿಗಳಲ್ಲಿ ಕಾನೂನು ಕಟ್ಟಲೆಯ ಭೀತಿ ಹುಟ್ಟಿಸಿ ಹಣ ಸುಲಿಗೆ ಮಾಡುತ್ತಿರುವುದು ನಿಮಗೆ ಗೊತ್ತಿಲ್ಲದಿರುವ ವಿಷಯವೇ ಅಲ್ಲ!!
ನಿಮ್ಮಲ್ಲಿ ನಾವು ಕೇಳಿಕೊಳ್ಳುವುದಿಷ್ಟೆ:
೧. ನಮ್ಮ ರಾಜ್ಯದ ಪೋಲೀಸ್ ಇಲಾಖೆ ನಮ್ಮ ದೇಶದ ಒಂದು ಆದರ್ಶ ಇಲಾಖೆಯಾಗಿ ಪರಿವರ್ತನೆ ಮಾಡುವ ಪ್ರಯತ್ನ ಅತಿ ಶೀಘ್ರದಲ್ಲಿ ನೀವು ಮಾಡಬೇಕು. ನಿಮ್ಮ ಪ್ರಯತ್ನದ ಫಲಿತಾಂಶ ನಿಮ್ಮ ಅಧಿಕಾರ ಅವಧಿಯಲ್ಲೆ ಕಾಣಿಸಿಕೊಳ್ಳಬೇಕು.
೨. ಪ್ರಜೆಗಳು ನಿರ್ಭಯದಿಂದ ಆರಕ್ಷಕ ಠಾಣೆಗೆ ದೂರುಗಳನ್ನು ನೀಡುವುದಾಗಲಿ, ಸಹಾಯ ಕೋರುವುದಾಗಲಿ, ಇಲಾಖೆಗೆ ಸಾಂದರ್ಭಿಕ ನೆರವು ನೀಡುವುದರಲ್ಲಿಯೂ ಹಿಂಜರಿಯದಿರುವ ಒಂದು ಮನೋಸ್ಥೈರ್ಯ ಉಂಟಾಗಬೇಕು.
೩. ಪೋಲೀಸರ ಶಿಸ್ತನ್ನು ಪ್ರತಿನಿಧಿಸುವ ಅವರ ವೇಶ, ನಡತೆ, ದೇಹ ಸೌಷ್ಟತೆ, ಪ್ರಙ್ನೆ ಇವುಗಳನ್ನು ಉಲ್ಬಣಪಡಿಸಬೇಕು.
೪. ಬಹಳಷ್ಟು ಪೋಲೀಸ್ ವಸತಿಗೃಹಗಳು ಅತಿ ಕೀಳು ಗುಣಮಟ್ಟದ್ದಾಗಿದೆ. ಹಾಗೆಯೆ, ಠಾಣೆಗಳ ಕಟ್ಟಡಗಳೂ ಯಾವುದೇ ಅಭಿವೃದ್ಧಿ ಕಾಣದ ದುಃಸ್ಥಿತಿಯಲ್ಲಿದೆ. ಸುಲಿಗೆ ಮಡುವುದನ್ನು ನಿಲ್ಲಿಸಿದಲ್ಲಿ, ಅದೇ ಹಣವು ಕಾನೂನುಬದ್ಧವಾಗಿ ಇಲಾಖೆಗೇ ಸೇರುವ ಏರ್ಪಾಡನ್ನು ನೀವು ಮಾಡಲೇಬೇಕು.
೫. ರಸ್ತೆ ಬದಿಯ ವ್ಯಾಪಾರಿಗಳಿಗೆ ಕಾನೂನಿನ ಕ್ರಮದಲ್ಲಿ, ನಿರ್ದಿಷ್ಟ ಅವಧಿ, ನಿರ್ದಿಷ್ಟ ಸ್ಥಳ, ಮಾಸಿಕ ಅಥವಾ ಸಾಪ್ತಾಹಿಕ ಶುಲ್ಕ, ಪರವಾನಗಿ ಪತ್ರ ಇವುಗಳನ್ನು ಶೀಘ್ರದಲ್ಲೆ ಜಾರಿಗೆ ತನ್ನಿ (legalize)

ಮಿಕ್ಕ ಕಾನ್ನೂನಿನ ಕ್ರಮಗಳನ್ನ ನೀವೇ ಕೈಗೊಳ್ಳುತ್ತೀರಿ ಎಂದು ನಾವು ನಂಬುತ್ತೇವೆ.
ನಿಮ್ಮ ಪಕ್ಷದ ಒಳಜಗಳಗಳನ್ನ ಬದಿಗಿಟ್ಟು, ಜನರ ಸೇವೆಗೆ ಮುಖ್ಯತ್ವ ಕೊಟ್ಟು, ಈ ನಮ್ಮ ಕಳಕಳಿಗೆ ತಕ್ಷಣ ಪ್ರತಿಸ್ಪಂದಿಸಿ.
Comments