ಕವಿತೆ
ಬ್ಯಾ ಬ್ಯಾ ಕರಿ ಕುರಿಇನ್ನೊಂದ್ ಕವಿತೆ
ನೀನ್ ಹೊದ್ಯ ಕಂಬ್ಳಿ ಮರಿ?
ಹೌದ್ರಿ ಸರ ಹೌದ್ರಿ ಸರ
ಮೂರ್ ಚೀಲದ ತುಂಬ್ ಬರೋಬರ
ಬ್ಯಾ ಬ್ಯಾ ಕರಿ ಕುರಿ
ನೀನ್ ಹೊದ್ಯ ಕಂಬ್ಳಿ ಮರಿ?
ಹೌದ್ರಿ ಸರ ಹೌದ್ರಿ ಸರ
ಮೂರ್ ಚೀಲದ ತುಂಬ್ ಬರೋಬರ
ಒಂದ ನನ್ ಸಾಹೇಬರ್ಗ
ಮತ್ತೊಂದ್ ಅವ್ರ್ ಹೆಂಡತೀಗ
ಮಿಕ್ಕಿದ್ ಆ ಮೂಲೀಲಿರೋ
ಚಿಕ್ ಮಗೀಗ
ಯೆಂಕ ಓದ ಬಸ್ವಿ ಓದ್ಲು ಬೆಟ್ಟದ್ ಮ್ಯಾಕೆ
ಒಂದ್ ಕೊಡದ್ ತುಂಬಾ ನೀರ್ ತತ್ತಾರಕ್ಕೆ
ಯೆಂಕ ಬಿದ್ದ ಕೆಳಾಕ್ಕೆ ಮುರ್ಕೊಂಡ್ ಸೊಂಟಾವ
ಅವ್ನ್ ಹಿಂದೆ ಉರಳ್ಕೊಂಡ್ ಬಿದ್ಲು ನಮ್ ಬಸ್ವವ್ವ
ಬಸ್ವ ಮ್ಯಾಕೆದ್ದು, ಬಸ್ವಿದ್ ಕೈ ಹಿಡ್ದು
"ನಿಂಗ್ಯೇನಾಗಿಲ್ಲಾಂದ್ರೆ ಕೊಡುವ್ಕೊ ಮೈನ,
ಮತ್ತ ಮ್ಯಾಕ್ ಹೋಗಿ ನೀರ ತತ್ತಾರೋಣ"
ಅಂಗಂದ್ ಬಸ್ವೀನ್ ಮ್ಯಾಕ್ ಎಬ್ಬುಸ್ದ
ಮತ್ತೆ ಬೆಟ್ಟಾ ಹತ್ತಿ ಬಸ್ವಿ ಯೆಂಕ
ಹೋದ್ರು ಕೊಡದ್ ತುಂಬ್ ನೀರ್ ತತ್ತಾರಕ್ಕ
ಇಬ್ರು ತಕ್ಕೋಂಡ್ ಹೋದ್ರು ಕೊಡ, ಅವ್ರ್ ಅಮ್ಮಂಗ್ ಕೊಡಾಕ್ಕ
ಅಮ್ಮಂಗ್ ಖುಷಿ ಆದಾಂಗ, ಎಲ್ರೂ ಕುಣುದ್ರು ತಕತಕ
Translated to Kannada by me. Copyrights reserved
No comments:
Post a Comment